ನವದೆಹಲಿ, ಆ 29 (DaijiworldNews/MS): ಆ್ಯಪ್ಗಳ ನಿಷೇಧ ತನ್ನ ಕೆಲಸವಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ’ಟ್ರೂಕಾಲರ್ ಮೊಬೈಲ್ ಅಪ್ಲಿಕೇಶನ್ ’ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಲು ಸೋಮವಾರ ನಿರಾಕರಿಸಿದೆ.
ತಮ್ಮ ಅನುಮತಿಯಿಲ್ಲದೆ ಟ್ರೂಕಾಲರ್ ಆ್ಯಪ್ ವೈಯಕ್ತಿಕ ಮಾಹಿತಿಯನ್ನು ಬಳಕೆ ಮಾಡುತ್ತಿದೆ ಎಂದು ಅಂಕಿತ್ ಸೇಥಿ ಎಂಬುವವರು ದೂರಿದ್ದರು. ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾ ಎಸ್ ರವೀಂದ್ರ ಭಟ್ ಅವರಿದ್ದ ಪೀಠ ಅಂತಹ ಆ್ಯಪ್ ಸ್ಥಗಿತಗೊಳಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದು ಹೇಳಿದೆ.
ಅಂತಹ ಅಪ್ಲಿಕೇಷನ್ಗಳನ್ನು ಸ್ಥಗಿತಗೊಳಿಸುವುದು ನ್ಯಾಯಾಲಯದ ಕೆಲಸವೇ? ಆ ರೀತಿಯ ಆ್ಯಪ್ಗಳ ವಿರುದ್ಧ ಎಷ್ಟು ಅರ್ಜಿಗಳನ್ನು ಪುರಸ್ಕರಿಸಲು ಸಾಧ್ಯ?” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಅತಿಕ್ರಮಣಕಾರಿ ಆ್ಯಪ್ಗಳನ್ನು ಸ್ಥಗಿತಗೊಳಿಸುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ ಎಂದು ಪೀಠ ಸ್ಪಷ್ಟಪಡಿಸಿದಾಗ ಅರ್ಜಿದಾರರು ಮನವಿಯನ್ನು ಹಿಂಪಡೆದರು.