ನವದೆಹಲಿ, ಆ 29 (DaijiworldNews/HR): ಜಿಯೋ 5G ಸೇವೆ 2 ತಿಂಗಳೊಳಗೆ ಆರಂಭವಾಗಲಿದೆ ಎಂದು ಆರ್ಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮುಕೇಶ್ ಅಂಬಾನಿ, 2022 ರ ದೀಪಾವಳಿಯಲ್ಲಿ, ಜಿಯೋ 5 ಜಿ ಅನ್ನು ಭಾರತದ ಮೆಟ್ರೋ ನಗರಗಳಲ್ಲಿ ಪ್ರಾರಂಭಿಸಲಾಗುವುದು. '5ಜಿಯನ್ನು ಬಳಸಿಕೊಂಡು, ನಾವು ಉನ್ನತ ಗುಣಮಟ್ಟದ, ಹೆಚ್ಚು ಕೈಗೆಟುಕುವ ಸ್ಥಿರ ಬ್ರಾಡ್ಬ್ಯಾಂಡ್ ಸೇವೆಗಳ ರೋಲ್-ಔಟ್ ಅನ್ನು ತ್ವರಿತಗೊಳಿಸಬಹುದು ಎಂದರು.
ಇನ್ನು ನಮ್ಮ ಕಂಪನಿಯು ವಾರ್ಷಿಕ ಆದಾಯದಲ್ಲಿ 100 ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದಿದ್ದಾರೆ.