ಡೆಹ್ರಾಡೂನ್, ಆ 29 (DaijiworldNews/HR): ಉತ್ತಮ ಪ್ರದೇಶದ ಡೆಹ್ರಾಡೂನ್ ಜಿಲ್ಲೆಯ ನಾಗಘೇರ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಾಯಿ ಹಾಗೂ ಹೆಂಡತಿಯ ಜೊತೆಗೆ ಮೂವರು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಆರೋಪಿಯನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಈತ ತನ್ನ ಕುಟುಂಬದ ಐವರನ್ನು ಅಮಾನುಷಯವಾಗಿ ಕೊಲೆ ಮಾಡಿ ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ತಾಯಿ, ಹೆಂಡತಿ ಹಾಗೂ ಮೂವರು ಮಕ್ಕಳನ್ನು ಆರೋಪಿ ಬರ್ಬರವಾಗಿ ಹತ್ಯೆ ಮಾಡಿದ್ದು, ಮತ್ತೊಬ್ಬ ಮಗಳು ಚಿಕ್ಕಮ್ಮನ ಬಳಿಗೆ ಹೋಗಿದ್ದರಿಂದ ಬದುಕುಳಿದ್ದಾಳೆ.
ಇನ್ನು ಕೊಲೆಗೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.