ಬೆಂಗಳೂರು, ಆ 29 (DaijiworldNews/MS): ತಮ್ಮ ಮನೆಗೆ ಮಳೆನೀರು ನುಗ್ಗಿದ್ದ ವಿಚಾರಕ್ಕೆ ರಾಜ್ಯಸಭೆ ಸದಸ್ಯ, ನಟ ಜಗ್ಗೇಶ್ ಟ್ವೀಟ್ ಮಾಡಿದ್ದು, ಇದು ಕಾಂಗ್ರೆಸ್ ಗೆ ಸರ್ಕಾರವನ್ನು ಟೀಕಿಸಲು ಅಸ್ತ್ರವಾಗಿ ಪರಿಣಮಿಸಿದೆ.
ಬಿಜೆಪಿ ರಾಜ್ಯ ಸಭಾ ಸಂಸದರು ಪ್ರವಾಹದಿಂದ ತಮಗೆ ಆಗುತ್ತಿರುವ ತೊಂದರೆ ಬಗೆಹರಿಸಿ ಎಂದು ಮನವಿ ಸಲ್ಲಿಸುತ್ತಿದ್ದರೆ ಬಗೆಹರಿಸಿ ಎಂದು ಮನವಿ ಸಲ್ಲಿಸುತ್ತಾರೆ ಎಂದರೆ ಈ 40% ಸರ್ಕಾರದ ಪ್ರವಾಹದ ನಿರ್ವಹಣೆ ಹೇಗಿದೆ ಎಂಬುದು ಅರಿವಾಗುತ್ತದೆ.
ಸಂಸದರಿಗೆ ಹೀಗಾದರೆ ಇನ್ನು ಜನಸಾಮಾನ್ಯರ ಗತಿ? ಜಗ್ಗೇಶ್ ಅವರ 'ಎದ್ದೇಳು ಮಂಜುನಾಥಾ' ಕೂಗಿಗೆ ಬಿ.ಎಸ್ ಬೊಮ್ಮಾಯಿ ಎದ್ದೇಳುತ್ತಾರಾ? ಎಂದು ಪ್ರಶ್ನಿಸಿದೆ.
ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿರುವ ಜಗ್ಗೇಶ್ ಮನೆಗೆ ನೀರು ನುಗ್ಗಿತ್ತು.ಮಾಯಸಂದ್ರ ಜಗ್ಗೇಶ್ ಹುಟ್ಟೂರು. ಮಾಯಸಂದ್ರ ಗ್ರಾಮದ ಜಗ್ಗೇಶ್ ತೋಟದ ಮನೆ ಜಲಾವೃತಗೊಂಡಿದೆ. ನಿನ್ನೆ ರಾತ್ರಿ ಸುರಿದ ಮಳೆಯಿಂದ ಮನೆ ಜಲಾವೃತಗೊಂಡಿದೆ. ಮನೆಗೆ ನೀರು ನುಗ್ಗಿರುವುದರ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು
ನೀರು ಹರಿಯುವ ಕಾಲುವೆ ಒತ್ತುವರಿ ಮಾಡಿಕೊಂಡ ಪರಿಣಾಮ ಮನೆಗೆ ನೀರು ನುಗ್ಗಿದೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮೂಲಕ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಅಸಮಧಾನ ಹೊರಹಾಕಿದ್ದರು.