ನವದೆಹಲಿ, ಆ 29 (DaijiworldNews/HR): ಬಲವಂತವಾಗಿ ನನ್ನನ್ನು ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ ಎಂದು ಮಾಜಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಹಲವು ಬಾರಿ ಸಭೆ ನಡೆದಿದೆ. ಆದರೆ ಒಂದು ಸಲಹೆ ಕೂಡಾ ನೀಡಲಿಲ್ಲ. ನನನ್ನು ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ ಎಂದಿದ್ದಾರೆ.
ಇನ್ನು ಹಿರಿಯ ಗಾಂಧಿ ಕುಟುಂಬ ಹೆಚ್ಚಾಗಿ ಸಮಾಲೋಚನಾತ್ಮಕ ರಾಜಕಾರಣದಲ್ಲಿ ನಂಬಿಕೆ ಹೊಂದಿದ್ದರು ಆದರೆ ಇದನ್ನು ರಾಹುಲ್ ಗಾಂಧಿ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.