ಮಹಾರಾಷ್ಟ್ರ, ಆ 29 (DaijiworldNews/HR): 10 ಲಕ್ಷ ರೂ. ಘೋಷಿತ ಬಹುಮಾನ ಹೊಂದಿದ್ದ ಮೂವರು ನಕ್ಸಲೀಯರನ್ನು ಮಹಾರಾಷ್ಟ್ರದ ಗಡ್ಚಿರೋಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ರಮೇಶ್ ಪಲ್ಲೊ (29), ತಾನಿ ಅಲಿಯಾಸ್ ಶಶಿ ಪುಂಗಟಿ (23) ಮತ್ತು ಅರ್ಜುನ್ ಅಲಿಯಾಸ್ ಮಹೇಶ್ ನರೋಟೆ (27) ಎಂದು ಗುರುತಿಸಲಾಗಿದೆ.
ಕೋಯಾರ್ ಅರಣ್ಯ ಪ್ರದೇಶದಲ್ಲಿ ಸಿಆರ್ಪಿಎಫ್ ಮತ್ತು ಪೊಲೀಸರು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ರಮೇಶ್ ಮತ್ತು ತಾನಿಯನ್ನು ಬಂಧಿಸಲಾಗಿದ್ದು, ಝರೆವಾಡ ಗ್ರಾಮದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಅರ್ಜುನ್ನನ್ನು ಬಂಧಿಸಲಾಗಿದೆ.
ಇನ್ನು ಮೂವರು ನಕ್ಸಲೀಯರನ್ನು ಬಂಧಿಸಿದರೆ ರಮೇಶ್ಗೆ 4 ಲಕ್ಷ, ಅರ್ಜುನ್ಗೆ 2 ಲಕ್ಷ ಮತ್ತು ತಾನಿಗೆ 4 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.