ನೋಯ್ಡಾ, ಆ 29 (DaijiworldNews/HR): ಶ್ರೀಕೃಷ್ಣ ಮೂರ್ತಿಯ ವಿಸರ್ಜನೆ ವೇಳೆ ದೆಹಲಿ ನೋಯ್ಡಾ ಡೈರೆಕ್ಟ್(ಡಿಎನ್ಡಿ) ಮೇಲ್ಸೇತುವೆ ಅಡಿಯಲ್ಲಿರುವ ಯಮುನಾ ನದಿಯಲ್ಲಿ ಮುಳುಗಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಅಂಕಿತ್ (20), ಲಕ್ಕಿ (16), ಲಲಿತ್ (17), ಬೀರು (19) ಮತ್ತು ರಿತು ರಾಜ್ ಅಲಿಯಾಸ್ ಸಾನು (20) ಎಂದು ಗುರುತಿಸಲಾಗಿದೆ.
ಶ್ರೀಕೃಷ್ಣ ಮೂರ್ತಿ ವಿಸರ್ಜನೆ ನಂತರ ವಿಗ್ರಹವೊಂದು ನದಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದು, ಅದನ್ನು ನೋಡಿದ ನಂತರ, ಆರು ಜನರು ನದಿಗೆ ಧುಮುಕಿದ್ದಾರೆ. ಆರು ಜನ ಯುವಕರಲ್ಲಿ ಒಬ್ಬರು ಮಾತ್ರ ಹಿಂತಿರುಗಿದ್ದು,, ಉಳಿದ ಐವರು ಯಮುನೆಯಲ್ಲಿ ಮುಳುಗಿದ್ದಾರೆ ಎಂದು ಪೊಳಿಸರು ತಿಳಿಸಿದ್ದಾರೆ.