ನವದೆಹಲಿ, ಆ 28 (DaijiworldNews/DB): ಗಡಿ ಭದ್ರತಾ ಪಡೆಯ ಸಬ್ ಇನ್ಸ್ಪೆಕ್ಟರ್ ಓರ್ವರಿಗೆ ಅವರ ಸ್ನೇಹಿತನೇ ಗುಂಡು ಹಾರಿಸಿದ ಪ್ರಕರಣ ನೈಋತ್ಯ ದೆಹಲಿಯ ನಜಾಫ್ಗಡದಲ್ಲಿ ನಡೆದಿದೆ.
ಸಬ್ ಇನ್ಸ್ಪೆಕ್ಟರ್ ಸಂದೀಪ್ ಕುಮಾರ್ ಗುಂಡೇಟಿನಿಂದ ಗಾಯಗೊಂಡವರು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮತ್ತಿನಲ್ಲಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿರುವುದಾಗಿ ವರದಿಯಾಗಿದೆ. ವೆಂಕಟೇಶ್ವರ ಆಸ್ಪತ್ರೆ ಸಿಬಂದಿ ನಜಾಫ್ಗಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರಿಂದ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಸಬ್ ಇನ್ಸ್ಪೆಕ್ಟರ್ ಸಂದೀಪ್ಕುಮಾರ್ ಅವರು ತಮ್ಮ ಇಬ್ಬರು ಸಂಬಂಧಿ, ಮತ್ತು ಸ್ನೇಹಿತ ಸಂದೀಪ್ ಸೆಹ್ವಾಗ್ ಜೊತೆ ದ್ವಾರಕಾ ಪ್ರದೇಶದಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದರು. ಸೆಹ್ವಾಗ್ ತನ್ನ ಬಳಿ ಪಿಸ್ತೂಲ್ ಹೊಂದಿದ್ದ. ಆತ ಅಮಲಿನಲ್ಲಿ ತೇಲಾಡುತ್ತಿದ್ದ. ಈ ವೇಳೆ ಆತ ಗುಂಡು ಹಾರಿಸಿದ್ದು, ಅದು ಸಂದೀಪ್ ಅವರಿಗೆ ತಗುಲಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.