ಮುಂಬೈ, ಅಆ 28 (DaijiworldNews/HR): ಅತ್ಯಾಚಾರದ ಆರೋಪಿಗಳನ್ನು ಸನ್ಮಾನಿಸುವುದು ಹಿಂದೂ ಸಂಸ್ಕೃತಿಯೇ? ಎಂದು ಶಿವಸೇನೆಯು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯದಲ್ಲಿಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ಪ್ರಶ್ನಿಸಿದೆ.
ಇನ್ನು 2022 ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಬಿದ್ದಾಗ 5 ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಆಕೆಯ ಮೂರು ವರ್ಷದ ಮಗಳು ಹತ್ಯೆಗೊಳಗಾದ 7 ಮಂದಿಯನ್ನು ಆ.15 ರಂದು ಗೋಧ್ರಾ ಉಪಜೈಲಿನಿಂದ 11 ಮಂದಿ ಆರೋಪಿಗಳು ಬಿಡುಗಡೆಯಾಗಿರುವುದಕ್ಕೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.