ದೆಹಲಿ, ಆ 28 (DaijiworldNews/HR): ರಾಷ್ಟ್ರಕ್ಕಾಗಿ ಖಾದಿ. ಆದರೆ, ರಾಷ್ಟ್ರಧ್ವಜಕ್ಕೆ ಮಾತ್ರ ಚೈನೀಸ್ ಪಾಲಿಯೆಸ್ಟರ್!. ಎಂದಿನಂತೆ ಪ್ರಧಾನಿಯವರ ಮಾತುಗಳು ಮತ್ತು ಕಾರ್ಯಗಳು ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಮತ್ತು ನಡೆ ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ರಾಷ್ಟ್ರಕ್ಕಾಗಿ ಖಾದಿ. ಆದರೆ, ರಾಷ್ಟ್ರಧ್ವಜಕ್ಕೆ ಮಾತ್ರ ಚೈನೀಸ್ ಪಾಲಿಯೆಸ್ಟರ್ʼ!. ಎಂದಿನಂತೆ, ಪ್ರಧಾನಿಯವರ ಮಾತುಗಳು ಮತ್ತು ಕಾರ್ಯಗಳು ಎಂದಿಗೂ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ.
ಇನ್ನು ಆತ್ಮನಿರ್ಭರ ಭಾರತದ ಕನಸನ್ನು ನನಸಾಗಿಸಲು ಖಾದಿ ಸ್ಫೂರ್ತಿಯ ಮೂಲವಾಗಬಹುದು ಎಂದು ಪ್ರಧಾನಿ ಶನಿವಾರ ಹೇಳಿದ್ದರು.