ಅಮೇಥಿ, ಆ 28 (DaijiworldNews/DB): ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದು ನಿಜವಾದ ಆಜಾದಿಯಾಗಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದು ಈಗ ನಿಜವಾದ ಆಜಾದಿಯಾಗಿದ್ದಾರೆ. ಆದರೆ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಅಮೇಥಿ ಹಲವು ವರ್ಷಗಳ ಹಿಂದೆಯೇ ಕಾಂಗ್ರೆಸ್ನಿಂದ ವಿಮೋಚನೆಗೊಂಡಿತ್ತು ಎಂದರು.
ಕಾಂಗ್ರೆಸ್ ತೊರೆದ ಗುಲಾಂ ನಬಿ ಅವರು ಕಾಂಗ್ರೆಸ್ ನಾಯಕತ್ವದ ಬಗ್ಗೆಯೇ ಅಸಮಾಧಾನ ಹೊರ ಹಾಕಿದ್ದಾರೆ. ಗಾಂಧಿ ಕುಟುಂಬದ ಬಗ್ಗೆ ಅದರ ಸ್ವಂತ ನಾಯಕತ್ವವೇ ಟೀಕೆ ಮಾಡುತ್ತಿರುವಾಗ ನಾವೇನು ಹೇಳುವ ಅಗತ್ಯವಿಲ್ಲ ಎಂದವರು ತಿಳಿಸಿದರು.
ಹಿಂದಿನ ಅಮೇಥಿಯಲ್ಲಿ ಅಧಿಕಾರವೆಂಬುದು ದೈತ್ಯವಾಗಿತ್ತು. ಆದರೆ ಈಗಿನ ಅಮೇಥಿ ಸಂಪೂರ್ಣ ಬದಲಾಗಿದೆ. ಸೇವಾ ಮನೋಭಾವವೇ ಈಗಿನ ಅಮೇಥಿಯ ಅಧಿಕಾರದ ಮೂಲಮಂತ್ರ ಎಂದು ಇರಾನಿ ವಿವರಿಸಿದರು.