ಮಧ್ಯಪ್ರದೇಶ, ಆ 28 (DaijiworldNews/HR): ಅಂತಾರಾಜ್ಯ ದರೋಡೆಕೋರರ ಗ್ಯಾಂಗ್ 12 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ದರೋಡೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆದ್ದು, ಘಟನೆ ನಡೆದ ಕೇವಲ 24 ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡಿನಿಂದ ಹರಿಯಾಣದ ಗುರುಗ್ರಾಮಕ್ಕೆ ಮೊಬೈಲ್ ಫೋನ್ಗಳ ಬಾಕ್ಸ್ ತುಂಬಿಕೊಂಡು ಕಂಟೈನರ್ ಹೊರಟಿದ್ದು, ಈ ವೇಳೆ ಮಧ್ಯಪ್ರದೇಶದ ಸಾಗರ್ ಎಂಬಲ್ಲಿ ನಾಲ್ವರು ದರೋಡೆಕೋರರು ಅಡ್ಡಗಟ್ಟಿ ಕಳ್ಳತನ ಮಾಡಿದ್ದಾರೆ.
ಇನ್ನು 12 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಬಾಕ್ಸ್ಗಳನ್ನು ಇನ್ನೊಂದು ಲಾರಿಗೆ ತುಂಬಿಕೊಂಡು ಪರಾರಿಯಾಗಿದ್ದು, ಇದರ ಬಗ್ಗೆ ಪೊಲೀಸರಿಗೆ ಬಂದಿತ್ತು, ಈ ವೇಳೆ ಮಧ್ಯಪ್ರದೇಶದ ಇಂದೋರ್ನ ಶಿಪ್ರಾ ಎಂಬಲ್ಲಿ ವಾಹನ ತಪಾಸಣೆ ವೇಳೆ ಲಾರಿ ಸಿಕ್ಕಿಬಿದ್ದಿದೆ.