ಪಣಜಿ, ಆ 28 (DaijiworldNews/HR): ನಟಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಇಂದು ಮತ್ತೋರ್ವ ಡ್ರಗ್ ಡೀಲರ್ ನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಸೋನಾಲಿಯ ಇಬ್ಬರು ಸಹಚರರನ್ನು ಬಂಧಿಸಿದ ಪೊಲೀಸರು ಶನಿವಾರ ಗೋವಾ ಕ್ಲಬ್ ಮಾಲಿಕ ಹಾಗೂ ಡ್ರಗ್ ಡೀಲರ್ ನನ್ನು ಬಂಧಿಸಿದ್ದು, ಇಂದು ಮತ್ತೊಬ್ಬರನ್ನು ಬಂಧಿಸಿದ್ದು, ಈವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ.
ಇನ್ನು ಹರಿಯಾಣ ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ಅವರು ಆಗಸ್ಟ್ 22 ರಂದು ರಾತ್ರಿ ಗೋವಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.