ರಾಮೇಶ್ವರಂ, ಆ 28 (DaijiworldNews/HR): ತಮಿಳುನಾಡಿನ ಆರು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದ್ದು, ಅವರ ದೋಣಿಯನ್ನುಇಂದು ಬೆಳಗ್ಗೆ ವಶಪಡಿಸಿಕೊಂಡಿದೆ.
ಸಾಂದರ್ಭಿಕ ಚಿತ್ರ
ಗಡಿ ದಾಟಿದ ಕಾರಣ ಶ್ರೀಲಂಕಾ ನೌಕಾಪಡೆಯು ನಿಶಾಂತ್ ಒಡೆತನದ ಬೋಟ್ ಜೊತೆಗೆ 6 ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದೆ.
ಇನ್ನು ಈ ಹಿಂದೆ ಆಗಸ್ಟ್ 22 ರಂದು ಶ್ರೀಲಂಕಾದ ನೀರಿನಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದಕ್ಕಾಗಿ ಹತ್ತು ಭಾರತೀಯ ಮೀನುಗಾರರನ್ನು, ಆಗಸ್ಟ್ 10 ರಂದು ತಮಿಳುನಾಡಿನ ಒಂದು ಯಾಂತ್ರೀಕೃತ ಮೀನುಗಾರಿಕಾ ಬೋಟ್ ಮತ್ತು 9 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯ ವಶಕ್ಕೆ ತೆಗೆದುಕೊಂಡಿದೆ.