ಕೊಲ್ಲಂ, ಆ 27 (DaijiworldNews/MS): ಕಳೆದ ತಿಂಗಳು ಕೇರಳದ ಕೊಲ್ಲಂ ಜಿಲ್ಲೆಯ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ತಮ್ಮ ಒಳಉಡುಪುಗಳನ್ನು ತೆಗೆಸಿದ್ದ ಹಿನ್ನೆಲೆಯಲ್ಲಿ ವಿವಾದವುಂಟಾದ ಕಾರಣ , ಆ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮತ್ತೊಮ್ಮೆ ನೀಟ್ ಪರೀಕ್ಷೆ ನಡೆಸಲು ನಿರ್ಧರಿಸಿದೆ .
ಈ ಮರು ಪರೀಕ್ಷೆಯೂ ಸೆಪ್ಟೆಂಬರ್ 4 ರಂದು ನಡೆಯಲಿದೆ.ಕೊಲ್ಲಂ ಮಾತ್ರವಲ್ಲದೇ ರಾಜಸ್ಥಾನ ಮತ್ತು ಮಧ್ಯಪ್ರದೇಶದ ತಲಾ 2 ಕೇಂದ್ರಗಳು, ಉತ್ತರ ಪ್ರದೇಶದ ಒಂದು ಕೇಂದ್ರದಲ್ಲಿಯೂ ನೀಟ್ ಮರುಪರೀಕ್ಷೆ ನಡೆಯಲಿದೆ.
ಜುಲೈ 17 ರಂದು ಕೊಲ್ಲಂ ಜಿಲ್ಲೆಯ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ವಿದ್ಯಾರ್ಥಿನಿಯರಿಗೆ ಒಳಉಡುಪನ್ನೂ ತೆಗೆದುಹಾಕಲು ಒತ್ತಾಯಿಸಿದ ವಿಷಯವು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.
ಪರೀಕ್ಷಾ ಅಕ್ರಮ ತಡೆಯಲು ಫ್ರಿಸ್ಕಿಂಗ್ ಹೆಸರಿನಲ್ಲಿ ಒಳ ಉಡುಪುಗಳನ್ನು ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರು ಮಹಿಳೆಯರು ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.