ಮೈಸೂರು, ಆ 27(DaijiworldNews/MS): ರಾಜ್ಯದ ಪ್ರತಿಷ್ಠಿತ ಮಠ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಶರಣರ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಸ್ವಾಮೀಜಿ ಸೇರಿ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗದ ಮುರುಘಾಮಠದಲ್ಲಿರುವ ಬಾಲಕಿಯರನ್ನು ಮಹಿಳಾ ವಾರ್ಡನ್, ಸ್ವಾಮೀಜಿಗಳಿಗೆ ಹಣ್ಣು ಕೊಟ್ಟು ಬನ್ನಿ ಎಂದು ಕಳುಹಿಸುತ್ತಿದ್ದರು. ತಮ್ಮ ಬಳಿ ಬಂದ ವಿದ್ಯಾರ್ಥಿನಿಯರನ್ನು ಸ್ವಾಮೀಜಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ನಡುವೆ ಮಠದಲ್ಲಿ ಸಲಹಾ ಸಮಿತಿ ಸಭೆ ನಡೆಸಲಾಗಿದ್ದು, ಈ ವೇಳೆ ತಮ್ಮ ಆಪ್ತರ ಬಳಿ ಮಾತನಾಡಿರುವ ಶರಣರು, ಮಠದಲ್ಲಿರುವವರೇ ಗರಿಷ್ಟ ಮಟ್ಟದ ಷಡಂತ್ರ್ಯ ರೂಪಿಸಿದ್ದಾರೆ. ಮಠದಲ್ಲಿ ಅಧಿಕಾರಕ್ಕಾಗಿ ಬಹುದೊಡ್ಡ ಸಂಘರ್ಷ ನಡೆಯುತ್ತಿದ್ದು, ಇವರಿಂದ ಈ ಸಂಚು ನಡೆದಿದೆ. ಸಮಸ್ಯೆ , ಸುಖ ಯಾವುದು ಶಾಶ್ವತವಲ್ಲ. ಸಂಧಾನಕ್ಕೂ ಸಿದ್ದ, ಸಮರಕ್ಕೂ ಸಿದ್ದ. ಬಾಲಕಿಯರು ಹೇಳುತ್ತಿರುವುದು ಸುಳ್ಳು. ಅವರಾಗಿಯೇ ಏನಾದ್ರೂ ತಪ್ಪು ಒಪ್ಪಿಕೊಂಡು ಬಂದರೇ ಕ್ಷಮಿಸಿ ಸಂಧಾನ ಮಾಡಿ ಸುಮ್ಮನಾಗೋಣಾ. ಆದ್ರೆ, ಕಾನೂನು ಸಮರಕ್ಕೆ ಮುಂದಾದಾದರೆ ಕಾನೂನು ಮೂಲಕ ಹೋರಾಟ ನಡೆಸೋಣಾ. ಯಾಕಂದರೆ ನಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ' ಎಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ