ಕೊಚ್ಚಿ, ಆ 27 (DaijiworldNews/HR): ಹೊಸ ಮಸೀದಿಯ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿ ಕೇರಳ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ಆದೇಶ ನೀಡಿದೆ.
ಕೇರಳದಲ್ಲಿ ಇರುವ ಜನರ ಸಂಖ್ಯೆಯನ್ನು ಹೋಲಿಕೆ ಮಾಡಿದರೆ ಧಾರ್ಮಿಕ ಕೇಂದ್ರಗಳ ಸಂಖ್ಯೆಯೇ ಇದೆ ಎಂದು ನ್ಯಾ.ಪಿ.ವಿ.ಕುಂಞಕೃಷ್ಣನ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಇನ್ನು ಈಗಾಗಲೇ ಹಲವು ಮಸೀದಿಗಳು ಇರುವ ಸ್ಥಳದಲ್ಲಿ ಹೊಸತನ್ನು ನಿರ್ಮಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮುಸ್ಲಿಂ ಸಮುದಾಯಕ್ಕೆ ಮಸೀದಿ ಅಗತ್ಯವಾಗಿದೆ. ಆದರೆ ಪವಿತ್ರ ಕುರಾನ್ನ ಪ್ರಕಾರ ಅಲ್ಲಲ್ಲಿ ಮಸೀದಿಯ ನಿರ್ಮಾಣ ಅಗತ್ಯವಿಲ್ಲ ಎಂದು ಪೀಠ ಹೇಳಿದೆ.