ದೆಹಲಿ, ಆ 27 (DaijiworldNews/HR): ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ ಓನರ್, ಡ್ರಗ್ ಪೆಡ್ಲರ್ನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕ್ಲಬ್ ಮಾಲೀಕ ಮತ್ತು ಡ್ರಗ್ ಪೆಡ್ಲರ್ ಸೇರಿದಂತೆ ಮತ್ತಿಬ್ಬರನ್ನು ಗೋವಾ ಪೊಲೀಸರು ಶುಕ್ರವಾರ ಬಂಧಿಸಿದ್ದು, ಕ್ಲಬ್ನ ವಾಶ್ರೂಮ್ನಿಂದ ಪೊಲೀಸರು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಕ್ಲಬ್ನಿಂದ ಡ್ರಗ್ಸ್ ವಶಪಡಿಸಿಕೊಂಡ ಕಾರಣ ಮಾಲೀಕರನ್ನು ಬಂಧಿಸಲಾಗಿದ್ದು, ವಶಪಡಿಸಿಕೊಂಡ ಡ್ರಗ್ಸ್ನ ಸ್ವರೂಪವನ್ನು ಇನ್ನೂ ದೃಢಪಡಿಸಲಾಗಿಲ್ಲ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.
ಇನ್ನು ಸೋನಾಲಿ ಅವರಿಗೆ ಒತ್ತಾಯಪೂರ್ವಕವಾಗಿ ವಿಷಯುಕ್ತ ಪಾನೀಯ ಕುಡಿಸಿ ಕೊಂದಿದ್ದಾರೆ. ಕೊಲೆ ಮಾಡಿರುವುದನ್ನು ಇಬ್ಬರು ಆರೋಪಿಗಳು ಒಪ್ಪಿಕೊಂಡಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.