ನವದೆಹಲಿ, ಆ 26 (DaijiworldNews/HR): ದೇಶವನ್ನು ನಾವು ಜೋಡಿಸುತ್ತಿದ್ದೇವೆ, ನೀವು ಕಾಂಗ್ರೆಸ್ ಪಕ್ಷ ಜೋಡಿಸುವ ಕೆಲಸ ಮೊದಲು ಮಾಡಿ ಎಂದು ಬಿಜೆಪಿಯು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ರಾಜೀನಾಮೆಗೆ ವ್ಯಂಗ್ಯವಾಡಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರಸ್ ಇನ್ನು ಕೆಲವೇ ದಿನಗಳಲ್ಲಿ ಭಾರತ್ ಜೋಡೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಹೊತ್ತಿನಲ್ಲಿ ಹಿರಿಯ ನಾಯಕರೊಬ್ಬರು ಪಕ್ಷ ತೊರೆದಿದ್ದಾರೆ. ಈ ಸಂದರ್ಭದಲ್ಲಿ ದೇಶ ಜೋಡಿಸುವ ಕೆಲಸವನ್ನು ನಾವು ಮಾಡುತ್ತೇವೆ, ನೀವು ನಿಮ್ಮ ಪಕ್ಷವನ್ನು ಜೋಡಿಸುವ ಕೆಲಸ ಮೊದಲು ಮಾಡಿ, ನಿಮ್ಮ ಪಕ್ಷವನ್ನು ಸರಿಪಡಿಸಿಕೊಳ್ಳಿ ಎಂದಿದೆ.
ಇನ್ನು ಗುಲಾಂ ನಬಿ ಆಜಾದ್ ಅವರ ರಾಜೀನಾಮೆ ನೀಡಿರುವುದು "ದುರದೃಷ್ಟಕರ" ಎಂದು ಕರೆದಿರುವ ಕಾಂಗ್ರೆಸ್ ಈ ಸಮಯ ಭೀಕರವಾಗಿದೆ ಎಂದು ಹೇಳಿದೆ.