ಬೆಳಗಾವಿ, ಅ 26(DaijiworldNews/MS): ಬೆಳಗಾವಿಯಲ್ಲಿ ಗಾಲ್ಫ್ ಕ್ಲಬ್ನಲ್ಲಿ ಅಡಗಿ ಕಣ್ಣು ಮುಚ್ಚಲೆಯಾಡಿ ಕಾರ್ಯಾಚರಣೆ ಸಿಗದ ಚಿರತೆಯಿಂದ ಜನರಲ್ಲಿ ಆತಂಕದ ಛಾಯೆ ಮೂಡುತ್ತಿದೆ. ಇನ್ನೊಂದೆಡೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ 20 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ಬಸವಳಿದಿದ್ದಾರೆ. ಈ ನಡುವೆ ಅಧಿಕಾರಿಗಳ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಇದೀಗ ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದು ಶತಾಯಗತಾಯ ಚಿರತೆ ಹಿಡಿಯಲೇಬೇಕೆಂದು ಹನಿಟ್ರ್ಯಾಪ್ ಅಸ್ತ್ರ ಬಳಸಿ ಚಿರತೆಯನ್ನು ಬಲೆಗೆ ಬೀಳಿಸಲು ತಯಾರಿ ನಡೆಸಿದ್ದಾರೆ. ಹೌದು ಇದಕ್ಕಾಗಿ 9 ಬೋನ್ ಇಟ್ಟು, ಹೆಣ್ಣು ಚಿರತೆ ಮೂತ್ರ ಸಿಂಪಡಿಸಲಾಗಿದೆ! ಈ ತಂತ್ರಕ್ಕಾದರೂ ಚಿರತೆ ಬೀಳುತ್ತಾ ಅನ್ನೋದು ಕದು ನೋಡಬೇಕು
ಚಿರತೆಯ ವಿಭಿನ್ನ ವರ್ತನೆ, ಗಾಲ್ಫ್ ಕ್ಲಬ್ನ ವಿಶಾಲವಾದ ಅರಣ್ಯ ಪ್ರದೇಶ, ವನ್ಯಜೀವಿ ತಜ್ಞರನ್ನೂ ಯಾಮಾರಿಸುತ್ತಿದೆ. ಈಗಾಗಲೇ 2 ಆನೆ, 180 ಅರಣ್ಯ ಸಿಬ್ಬಂದಿ, 8 ಶಾರ್ಪ್ ಶೂಟರ್ ಮೂಲಕ ಏನೆಲ್ಲ ಕಸರತ್ತು ನಡೆಸಿದರೂ, ಚಾಲಾಕಿ ಚಿರತೆ ಮಾತ್ರ ಬಲೆಗೆ ಬಿದ್ದಿಲ್ಲ.