ಬೆಂಗಳೂರು, ಆ 26 (DaijiworldNews/DB): ಬಿಜೆಪಿ ಭ್ರಷ್ಟೋತ್ಸವ ಧಾರಾವಾಹಿಯು ದಿನಕ್ಕೊಂದು ಎಪಿಸೋಡ್ನಂತೆ ಹೊರ ಬರುತ್ತಿದೆ. ಕೊಡಗಿನಲ್ಲಿ ಬಿಜೆಪಿಯ ಅಕ್ರಮದ ಮೊಟ್ಟೆ ಒಡೆದು ಭ್ರಷ್ಟಾಚಾರದ 'ಮರಿ' ಹೊರ ಬಂದಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಅಧಿಕಾರಿ ಲಂಚ ಪಡೆದು ಸಿಕ್ಕಿಬಿದ್ದರು, ಶಾಸಕ ಬೋಪಯ್ಯ ಆ ಅಧಿಕಾರಿಯಿಂದಲೇ ಲಂಚ ಪಡೆದರು!ಭ್ರಷ್ಟಾಚಾರದ ಆಟ ಚೆನ್ನಾಗಿದೆ! ಬೊಮ್ಮಾಯಿಯವರೇ ನಿಮ್ಮ ಪಾರದರ್ಶಕ ತನಿಖೆ ಯಾವಾಗ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗೃಹಸಚಿವರು ಸೇರಿ ವಿವಿಐಪಿಗಳಿಗೆ ಬಿಡಿಎ ನಿವೇಶನ ನೀಡಿಕೆ ಅಕ್ರಮ ಎಂದು ಸುಪ್ರೀಂ ಕೋರ್ಟ್ ಗುಡುಗಿದೆ. ಆಯುಕ್ತರಿಗೆ ವರ್ಗಾವಣೆ ಆದೇಶವಾಗಿದೆ. ಗೃಹ ಸಚಿವರಿಗೆ? ಅಭಿವೃದ್ಧಿಯಲ್ಲಿ ಬೆಂಗಳೂರನ್ನು 'ಜಾಗತಿಕ ನಗರ' ಮಾಡಬೇಕಿದ್ದ ಬಿಡಿಎ, ಬಿಜೆಪಿ ಆಡಳಿತದಲ್ಲಿ 'ಭ್ರಷ್ಟರ ಡೆವೆಲಪ್ಮೆಂಟ್ ಅಥಾರಿಟಿ' ಆಗಿದೆ ಎಂದು ಕಾಂಗ್ರೆಸ್ ದೂರಿದೆ.