ಅಸ್ಸಾಂ, ಆ 26 (DaijiworldNews/DB): ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್ಖೈದಾದೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಅಸ್ಸಾಂ ಪೊಲೀಸರು 34ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ್, ಬಂಧಿತರೆಲ್ಲರೂ ಅಲ್ಖೈದಾದೊಂದಿಗೆ ಸಂಬಂಧ ಹೊಂದಿದ್ದಾರೆ. ಬಾಂಗ್ಲಾದೇಶಿಗರು ಕೆಲವು ಸೇನಾ ತರಬೇತಿ ಶಿಬಿರಗಳನ್ನು ಸ್ಥಾಪಿಸಿದ್ದು, ಹೊಸ ಗುಂಪುಗಳನ್ನು ರಚಿಸುತ್ತಿರುವುದು ಗೊತ್ತಾಗಿದೆ. ಯುವಕರನ್ನು ದುರುಪಯೋಗಪಡಿಸಿಕೊಂಡು ಭಯೋತ್ಪಾದನೆ, ಮೂಲಭೂತವಾದಕ್ಕೆ ಸೆಳೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ. ಆದರೆ ಇಂತಹ ಷಡ್ಯಂತ್ರಗಳನ್ನು ಬೆಳೆಯಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಅಸ್ಸಾಂನ ಹೊರಗಿನಿಂದ ಬಂದವರು ಇಲ್ಲಿ ಸಂಚು ರೂಪಿಸುತ್ತಿದ್ದಾರೆ. ಕೆಲವು ಗುಂಪುಗಳನ್ನು ಕಟ್ಟಿಕೊಂಡು ಬೆಳೆಸುತ್ತಿದ್ದಾರೆ ಎಂದವರು ವಿವರಿಸಿದ್ದಾರೆ.