ನವದೆಹಲಿ, ಅ 25 (DaijiworldNews/MS): ಹೃದಯಾಘಾತದಿಂದ ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಸ್ಯನಟ ರಾಜು ಶ್ರೀವಾಸ್ತವ ಅವರು ಗುರುವಾರ ಪ್ರಜ್ಞಾ ಸ್ಥಿತಿಗೆ ಮರಳಿದ್ದಾರೆ ಎಂದು ಅವರ ಪಿಆರ್ ಓ ಮತ್ತು ಸಲಹೆಗಾರ ಅಜಿತ್ ಸಕ್ಸೇನಾ ತಿಳಿಸಿದ್ದಾರೆ.
ರಾಜು ಶ್ರೀವಾಸ್ತವ್ ಅವರು ಚಿಕಿತ್ಸೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ರಾಜು ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. 15 ದಿನಗಳ ನಂತರ ಇಂದು ರಾಜು ಶ್ರೀವಾಸ್ತವ ಅವರಿಗೆ ಪ್ರಜ್ಞೆ ಬಂದಿದೆ, ಅವರನ್ನು ದೆಹಲಿಯ ಏಮ್ಸ್ನಲ್ಲಿ ವೈದ್ಯರು ನಿಗಾ ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜು ಶ್ರೀವಾಸ್ತವ್ ಅವರು ಆಗಸ್ಟ್ 10 ರಂದು ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಕುಸಿದುಬಿದ್ದಿದ್ದರು . ಆ ಬಳಿಕ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಆಂಜಿಯೋಪ್ಲಾಸ್ಟಿಗೂ ಒಳಗಾಗಿದ್ದರು
ರಾಜುಗೆ ಪ್ರಜ್ಞೆ ಬರುತ್ತಿದ್ದಂತೆ ಕುಟುಂಬದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದಕ್ಕೂ ಮುನ್ನ ಹಾಸ್ಯನಟ ರಾಜ ಅವರು ಬ್ರೈನ್ ಡೆಡ್ ಆಗಿತ್ತು ಎಂದು ಅವರ ಆಪ್ತ ಮೂಲವೊಂದು ಬಹಿರಂಗಪಡಿಸಿತ್ತು.