ನವದೆಹಲಿ, ಅ 25 (DaijiworldNews/MS): ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಕುರ್ಚಿ ಅಲ್ಲಾಡುತ್ತಿದೆ. ಸೊರೆನ್ ಅವರು ಗಣಿ ಗುತ್ತಿಗೆಯನ್ನು ವಿಸ್ತರಿಸುವ ಮೂಲಕ ಚುನಾವಣಾ ಕಾನೂನನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಕೋರಿರುವ ಚುನಾವಣಾ ಆಯೋಗವು ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ತನ್ನ ಅಭಿಪ್ರಾಯವನ್ನು ಕಳುಹಿಸಿದೆ.
ಚುನಾವಣಾ ಆಯೋಗದ ಅಭಿಪ್ರಾಯವನ್ನು ಇಂದು ಬೆಳಗ್ಗೆ ಜಾರ್ಖಂಡ್ ರಾಜಭವನಕ್ಕೆ ಮುಚ್ಚಿದ ಕವರ್ನಲ್ಲಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಇದು ಜೆಎಮ್ ಎಮ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ೮೧ ಸದಸ್ಯ ಬಲ ವಿಧಾನಸಭೆಯಲ್ಲಿ ಜೆ ಎಮ್ ಎಮ್ ಮೂವತ್ತು ಹಾಗೂ ಕಾಂಗ್ರೆಸ್ ನ ಹದಿನೆಂಟು ಸೇರಿದಂತೆ ೫೧ಸದಸ್ಯ ಬಲದಿಂದ ಸರ್ಕಾರ ನಡೆಯುತ್ತಿದೆ.
ಸಂವಿಧಾನದ 192 ನೇ ವಿಧಿಯ ಅಡಿಯಲ್ಲಿ, ಒಂದು ರಾಜ್ಯದ ಶಾಸಕಾಂಗದ ಸದನದ ಸದಸ್ಯರು ಯಾವುದೇ ಅನರ್ಹತೆಗೊಳಪಡಿಸಲು ರಾಜ್ಯಪಾಲರ ತೀರ್ಮಾನವೇ ಅಂತಿಮವಾಗಿರುತ್ತದೆ. ಆದರೆ, ಚುನಾವಣಾ ಆಯೋಗದ ಅಭಿಪ್ರಾಯ ಪಡೆದು ಅದರಂತೆ ನಡೆದುಕೊಳ್ಳಬೇಕಾಗಿರುತ್ತದೆ.