ಜಮ್ಮು-ಕಾಶ್ಮೀರ, ಆ 25 (DaijiworldNews/DB): ಎಲ್ಇಟಿ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಜಮ್ಮು-ಕಾಶ್ಮೀರದ ಬಂಡಿಪೊರಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ.
26 ಅಸ್ಸಾಂ ರೈಫಲ್ಸ್ ನೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಉಗ್ರರಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಮೂರು ಪಿಸ್ತೂಲ್, 24 ಜೀವಂತ 9 ಎಂಎಂ ಮದ್ದು ಗುಂಡುಗಳು, 5 ಹ್ಯಾಂಡ್ ಗ್ರೇನೆಡ್ ಗಳಗಳನ್ನು ಬಂಧಿತರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರ ಬಳಿಯಿದ್ದ ನಕಲಿ ಪೊಲೀಸ್ ಗುರುತಿನ ಕಾರ್ಡ್ಗಳು, ಆರೋಗ್ಯ ಇಲಾಖೆಯ ನಕಲಿ ಐಡಿ ಕಾರ್ಡ್ ಹಾಗೂ ಮ್ಯಾಗಜೀನ್ನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.