ಬೆಂಗಳೂರು, ಆ 24 (DaijiwroldNews/SM): ಪಿಯು ಕಾಲೇಜುಗಳಲ್ಲಿ(PU College) ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ(Lecturer Post) ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
10 ವಿಷಯಗಳ 778 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. 100 ಕನ್ನಡ, 120 ಇಂಗ್ಲಿಷ್, 120 ಇತಿಹಾಸ, 180 ಅರ್ಥಶಾಸ್ತ್ರ, 20 ಭೂಗೋಳಶಾಸ್ತ್ರ, 80 ವಾಣಿಜ್ಯ ಶಾಸ್ತ್ರ, 75 ಸಮಾಜಶಾಸ್ತ್ರ, 75 ರಾಜ್ಯಶಾಸ್ತ್ರ, 2 ಮನ:ಶಾಸ್ತ್ರ ಮತ್ತು 6 ಗಣಕ ವಿಜ್ಞಾನ ಉಪನ್ಯಾಸಕರ ಹುದ್ದೆ ಭರ್ತಿಗೆ ಅಂಗಿಕಾರ ನೀಡಿದೆ.