ನವದೆಹಲಿ, ಆ 24 (DaijiworldNews/DB): ನಮ್ಮ ಪಕ್ಷದ ಯೂಟ್ಯೂಬ್ ಚಾನೆಲ್ನ್ನು ಅಳಿಸಿ ಹಾಕಲಾಗಿದ್ದು, ಇದು ತಾಂತ್ರಿಕ ದೋಷವೋ ಅಥವಾ ಪಿತೂರಿಯೋ ಎಂಬುದನ್ನು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹೆಸರಿನ ಯೂಟ್ಯೂಬ್ ಚಾನೆಲ್ನ್ನು ಡಿಲೀಟ್ ಮಾಡಲಾಗಿದೆ. ಆದರೆ ಯಾಕೆ ಡಿಲೀಟ್ ಮಾಡಲಾಗಿದೆ ಎಂದು ತಿಳಿದಿಲ್ಲ. ಈ ಸಂಬಂಧ ಯೂಟ್ಯೂಬ್ ಮತ್ತು ಗೂಗಲ್ ಸಂಸ್ಥೆಗಳನ್ನು ಸಂಪರ್ಕಿಸಲಾಗಿದ್ದು, ಚಾನೆಲ್ ಪುನಃಸ್ಥಾಪಿಸುವಂತೆ ಮಾತುಕತೆ ನಡೆಯುತ್ತಿದೆ ಎಂದು ಪಕ್ಷ ತಿಳಿಸಿದೆ.
ಚಾನೆಲ್ ಡಿಲೀಟ್ ಹಿಂದೆ ತಾಂತ್ರಿಕ ದೋಷವೋ ಅಥವಾ ಪಿತೂರಿ ಕಾರಣವೋ ಗೊತ್ತಿಲ್ಲ. ಶೀಘ್ರದಲ್ಲೇ ಮತ್ತೆ ಯೂಟ್ಯೂಬ್ ಚಾನೆಲ್ನೊಂದಿಗೆ ನಾವು ಹಿಂತಿರುಗುತ್ತೇವೆಂಬ ವಿಶ್ವಾಸವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.