ಕಾಸರಗೋಡು, ಅ 24 (DaijiworldNews/MS): ಕೇರಳ ತುಳು ಅಕಾಡೆಮಿ ಅಧ್ಯಕ್ಷರಾಗಿ ಕೆ . ಆರ್ ಜಯಾನಂದ ಅವರನ್ನು ಆಯ್ಕೆ ಮಾಡಲಾಗಿದೆ. ಅಕಾಡೆಮಿಯನ್ನು ಪುನಾರಚಿಸಿ ಸಾಂಸ್ಕೃತಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ . ಅಧ್ಯಕ್ಷ, ಕಾರ್ಯದರ್ಶಿ , ಮೂವರು ಅಧಿಕೃತ ಸದಸ್ಯರು ಸೇರಿದಂತೆ 17 ಮಂದಿ ಆಡಳಿತ ಸಮಿತಿಯಲ್ಲಿದ್ದಾರೆ.
ಕಾರ್ಯದರ್ಶಿಗಳಾಗಿ ಕಾಸರಗೋಡು ಸಹಕಾರಿ ಸಹಾಯಕ ನೋಂದಣಾಧಿಕಾರಿ ಎ.ರವೀಂದ್ರನಾಥ್ ರವರನ್ನು ಆಯ್ಕೆ ಮಾಡಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಶಾಸಕ ಎ.ಕೆ ಎಂ ಅಶ್ರಫ್ ಅಧಿಕೃತ ಸದಸ್ಯರಾಗಿದ್ದಾರೆ.
ನ್ಯಾಯವಾದಿ ಜಿ. ಚಂದ್ರ ಮೋಹನ್, ಕೃಷ್ಣ ವೇಣಿ ಟೀಚರ್, ಜೋಸೆಫ್ ಕ್ರಾಸ್ತಾ, ಸಿ.ಕೆ ಅಜಿತ್ ಚಿಪ್ಪಾರ್, ಉದಯ್ ಸಾರಂಗ್, ಗಣೇಶ್ , ಭುಜಂಗ ಶೆಟ್ಟಿ, ಎ. ಚಂದ್ರ ಶೇಖ ರ್ , ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಾರತಿ ಸುಳ್ಯಮೇ, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಅಬ್ದುಲ್ಲ ಪೈವಳಿಕೆ, ಗಂಗಾಧರ ದುರ್ಗಿಪಳ್ಳ ಮೊದಲಾದವರು ಸಮಿತಿ ಸದಸ್ಯರಾಗಿದ್ದಾರೆ