ಲಕ್ನೋ, ಆ 24 (DaijiwroldNews/HR): ರೈಲ್ವೇ ಸೇತುವೆಯ ಹಳಿ ಮೇಲೆ ರೀಲ್ಸ್ ಮಾಡಿದ್ದ ನಕಲಿ ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಜಮ್ ಅನ್ಸಾರಿ ವಿರುದ್ಧ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಎಫ್ಐಆರ್ ದಾಖಲಿಸಿದೆ.
ಇನ್ನು ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ ರೀಲ್ಸ್ಗಾಗಿ ವೀಡಿಯೊವನ್ನು ಚಿತ್ರೀಕರಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ರನ್ನೇ ಹೋಲುವ ಕಂಟೆಂಟ್ ಕ್ರಿಯೇಟರ್ ಮತ್ತು ಡಾಪಲ್ಗ್ಯಾಂಗರ್ ವಿರುದ್ದ ಕೇಸು ದಾಖಲಾಗಿದೆ.
ಅಜಮ್ ಅನ್ಸಾರಿ ವೀಡಿಯೋ ಚಿತ್ರೀಕರಣವನ್ನು ಲಕ್ನೋದ ರೈಲ್ವೇ ಸೇತುವೆಯ ಹಳಿಗಳ ಮೇಲೆ ರೀಲ್ಸ್ ಮಾಡಿದ್ದರು. ಈ ವೇಳೆ ಜನರಿಗೆ ತೊಂದರೆ ಕೂಡ ಉಂಟು ಮಾಡಿದ್ದರು. ಇನ್ಸ್ಟಾಗ್ರಾಮ್ ರೀಲ್ಸ್ ಅನ್ನು ಹಂಚಿಕೊಂಡ ನಂತ್ರ ಈ ವಿಷಯ ಬೆಳಕಿಗೆ ಬಂದಿದೆ. ನದಿಯ ರೈಲ್ವೆ ಸೇತುವೆಯ ಮೇಲೆ ರೀಲ್ಸ್ ಮಾಡಿದ್ದು, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಅನ್ಸಾರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.