ಬೆಂಗಳೂರು, ಆ 24 (DaijiwroldNews/HR): ಯುವತಿಯೊಬ್ಬಳು ಝಮ್ಯಾಟೊ ಡೆಲಿವರಿ ಏಜೆಂಟಿಗೆ ನಡು ರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಾವ ಕಾರಣಕ್ಕೆ ಯುವತಿ ಹಲ್ಲೆ ಮಾಡಿದ್ದಾಳೆ ಎಂಬುದರ ನಿಖರ ಕಾರಣ ತಿಳಿದು ಬಂದಿಲ್ಲ. ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಇನ್ನು ವಿಡಿಯೋ ಮಾಡಿದ ಗ್ರಾಹಕರು ಆತನಿಗೆ ಸಹಾಯ ಮಾಡುವಂತೆ ಕೋರಿ ಝೋಮ್ಯಾಟೋ ಕಾಲ್ ಸೆಂಟರ್ ಗೆ ಕರೆ ಮಾಡಿದರೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಲ್ಲೆ ಮಾಡಿದ ಯುವತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.