ಗಯಾ, 24 (DaijiworldNews/MS): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗಯಾದ ವಿಷ್ಣುಪಾದ ದೇವಾಲಯಕ್ಕೆ ಮತ್ತೊಂದು ಧರ್ಮದ ಸಚಿವ ಮೊಹಮ್ಮದ್ ಇಸ್ರೇಲ್ ಮನ್ಸೂರಿ ಕರೆದುಕೊಂಡು ಹೋಗಿದ್ದಕ್ಕಾಗಿ ಹಿಂದೂ ಸಂವೇದನೆಗಳಿಗೆ "ಉದ್ದೇಶಪೂರ್ವಕ ಅವಮಾನ ಮಾಡಿದ್ದಾರೆ" ಎಂದು ಬಿಜೆಪಿ ಆರೋಪಿಸಿದೆ.
ನಿತೀಶ್ ಅವರು ಸೋಮವಾರ ಮನ್ಸೂರಿ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಮನ್ಸೂರಿ ಅವರು, 'ಗೌರವಾನ್ವಿತ ಮುಖ್ಯಮಂತ್ರಿಯೊಂದಿಗೆ ದೇವಸ್ಥಾನ ದರ್ಶನಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಕೃತಾರ್ಥನಾಗಿದ್ದೇನೆ' ಎಂದು ಹೇಳಿದ್ದರು. ಮನ್ಸೂರಿ ಅವರು ಗಯಾದ ಉಸ್ತುವಾರಿ ಸಚಿವರಾಗಿದ್ದಾರೆ.
ಸಂಪ್ರದಾಯದಂತೆ, ಬಿಹಾರದ ಮಂತ್ರಿಗಳಿಗೆ ಜಿಲ್ಲೆಗಳ "ಪ್ರಭಾರ" (ಪ್ರಭಾರ) ನೀಡಲಾಗುತ್ತದೆ, ಅಲ್ಲಿ ಅವರು ಆಯಾ ಕಾರ್ಯಕ್ರಮ ಸಮನ್ವಯ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ಮನ್ಸೂರಿ ಅವರಿಗೆ ಗಯಾ ಉಸ್ತುವಾರಿ ನೀಡಲಾಗಿದೆ.
'ಮುಖ್ಯಮಂತ್ರಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು' ಎಂದು ಆಗ್ರಹಿಸಿರುವ ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್, 'ಸಹಿಷ್ಣುತೆಯ ಹೆಸರಿನಲ್ಲಿ ಹಿಂದೂಗಳು ಯಾವಾಗಲೂ ತಮ್ಮ ಧಾರ್ಮಿಕ ಭಾವನೆಗಳ ಜೊತೆಗೆ ಯಾಕೆ ರಾಜಿ ಮಾಡಿಕೊಳ್ಳಬೇಕು' ಮುಖ್ಯಮಂತ್ರಿ ಕ್ಷಮೆಯಾಚಿಸದಿದ್ದರೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಎದುರಿಸಬೇಕಾದೀತು' ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
'ಮನ್ಸೂರಿ ಅವರ ದೇವಾಲಯ ಪ್ರವೇಶದ ಬಗ್ಗೆ ನಮಗೆ ತಿಳಿದಿರಲಿಲ್ಲ. ದೇವಾಲಯದ ಆವರಣದಲ್ಲಿ 'ಸನಾತನ ಧರ್ಮದಲ್ಲಿ ನಂಬಿಕೆ ಇರುವವರು ಮಾತ್ರ ಪ್ರವೇಶಿಸಬಹುದು' ಎಂಬ ಫಲಕವಿದೆ. ಇಂತಹದ್ದನ್ನು ತಪ್ಪಿಸಬೇಕು' ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.