ಪಾಟ್ನಾ, ಆ 24 (DaijiwroldNews/HR): ಲಾಲು ಪ್ರಸಾದ್ ಯಾದವ್ ಅವರ ಅಧಿಕಾರಾವಧಿ ವೇಳೆ ಬಿಹಾರದಲ್ಲಿ ನಡೆದ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ನಾಯಕರಾದ ಅಶ್ಫಾಕ್ ಕರೀಮ್ ಮತ್ತು ಸುನಿಲ್ ಸಿಂಗ್, ಶುಬೋದ್ ರಾಯ್ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸುನಿಲ್ ಸಿಂಗ್, ಈ ದಾಳಿಯನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದ್ದು, ಅದಕ್ಕೆ ಯಾವ ಅರ್ಥವೂ ಇಲ್ಲ. ಭಯದಿಂದ ಶಾಸಕರು ತಮ್ಮ ಪರವಾಗಿ ಬರುತ್ತಾರೆ ಎಂದು ಭಾವಿಸಿ ಅವರು ಅದನ್ನು ಮಾಡುತ್ತಿದ್ದಾರೆ ಎಂದರು.
ಇನ್ನು ಸಂಸದ ಮನೋಜ್ ಝಾ ಪ್ರತಿಕ್ರಿಯಿಸಿ, ಇದು ಇಡಿ ಅಥವಾ ಐಟಿ ಅಥವಾ ಸಿಬಿಐ ದಾಳಿಯಾಗಿದೆ ಎಂದು ಹೇಳುವುದಿಲ್ಲ, ಇದು ಬಿಜೆಪಿಯ ದಾಳಿಯಾಗಿದೆ. ಸಿಬಿಐ ಅಧಿಕಾರಿಗಳು ಈಗ ಬಿಜೆಪಿ ಅಡಿಯಲ್ಲಿ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.