ಪಶ್ಚಿಮ ಬಂಗಾಳ, ಆ 23 (DaijiworldNews/HR): ಬಿರ್ಭುಮ್ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ಏಳು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ಬಿಕಿರ್ ಅಲಿ, ನೂರ್ ಅಲಿ, ಶೇರ್ ಅಲಿ ಅಲಿಯಾಸ್ ಕಲೋ, ಆಸಿಫ್ ಶೇಖ್, ಜೋಶಿಫ್ ಹೊಸೈನ್, ಜಮಿರುಲ್ ಶೇಖ್ ಅಲಿಯಾಸ್ ಉಜಿರ್ ಮತ್ತು ಖೈರುಲ್ ಶೇಖ್ ಎಂದು ಗುರುತಿಸಲಾಗಿದೆ.
ಇನ್ನು ಹತ್ಯಾಕಾಂಡದಲ್ಲಿ ಭಾಗಿಯಾದ ಆರೋಪದ ಮೇಲೆ ಕೇಂದ್ರ ತನಿಖಾ ಸಂಸ್ಥೆ ಒಂಬತ್ತು ಜನರನ್ನು ಈ ಹಿಂದೆ ಬಂಧಿಸಿತ್ತು.
ಮಾರ್ಚ್ 21 ರಂದು ಬೊಗ್ಟುಯಿಯಲ್ಲಿ ಹಲವಾರು ಮನೆಗಳ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ಗಳನ್ನು ಎಸೆದ ನಂತರ ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಹತ್ತು ಜನರನ್ನು ಸುಟ್ಟುಹಾಕಲಾಗಿತ್ತು.