ಬೆಂಗಳೂರು, ಆ 23 (DaijiworldNews/DB): ಬಟ್ಟೆ ಕೊಳ್ಳಲು ಬಟ್ಟೆ ಅಂಗಡಿಗೆ ಕರೆದೊಯ್ಯಲಿಲ್ಲ ಎಂದು ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.
5ನೇ ತರಗತಿ ವಿದ್ಯಾರ್ಥಿನಿ ವೈಶಾಲಿ ಆತ್ಮಹತ್ಯೆಗೈದ ಬಾಲಕಿ. ಹಬ್ಬದ ಹಿನ್ನೆಲೆಯಲ್ಲಿ ವೈಶಾಲಿಗೆ ಬಟ್ಟೆ ಈಗಾಗಲೇ ಖರೀದಿಸಲಾಗಿತ್ತು. ಉಳಿದಿಬ್ಬರು ಮಕ್ಕಳಿಗೆ ಬಟ್ಟೆ ಖರೀದಿಸಲಿಲ್ಲ ಎಂಬ ಕಾರಣಕ್ಕಾಗಿ ಆ ಇಬ್ಬರು ಮಕ್ಕಳನ್ನು ಪೋಷಕರು ಬಟ್ಟೆ ಅಂಗಡಿಗೆ ಕರೆದೊಯ್ದಿದ್ದರು. ಈ ವೇಳೆ ವೈಶಾಲಿ ತನ್ನನ್ನೂ ಕರೆದುಕೊಂಡು ಹೋಗುವಂತೆ ಹಠ ಹಿಡಿದಿದ್ದಾಳೆ. ಆದರೆ ಪೋಷಕರು ಆಕೆಯನ್ನು ಮನೆಯಲ್ಲೇ ಇರುವಂತೆ ಹೇಳಿ ಹೋಗಿದ್ದಾರೆ. ತನ್ನನ್ನು ಬಟ್ಟೆ ಅಂಗಡಿಗೆ ಕರೆದೊಯ್ಯಲಿಲ್ಲ ಎಂಬ ನೋವಿನಲ್ಲಿ ಬಾಲಕಿ ವೈಶಾಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821