ಮಡಿಕೇರಿ, ಆ 23 (DaijiworldNews/HR): ನಾವು ಹೋರಾಟ ಆರಂಭ ಮಾಡಿದಾಗೆಲ್ಲಾ 144 ಸೆಕ್ಷನ್ ಜಾರಿ ಮಾಡುತ್ತಾರೆ ಎಂದು ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಖಂಡಿಸಿ ಆಗಸ್ಟ್ 26 ರಂದು ಕಾಂಗ್ರೆಸ್ ಮಡಿಕೇರಿ ಚಲೋಗೆ ಕರೆ ನೀಡಿದ್ದು, ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್ 24 ರಿಂದ 27 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಾವು ಹೋರಾಟ ಶುರು ಮಾಡಿದಾಗೆಲ್ಲಾ 144 ಸೆಕ್ಷನ್ ಜಾರಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು 144 ಸೆಕ್ಷನ್ ಹಾಕಿ, ಕೇಸ್ ಹಾಕೋದು ಒಂಥರಾ ಸರ್ಕಾರದ ಚಾಳಿ ಆಗಬಿಟ್ಟಿದ್ದು, ಶಾಸಕಾಂಗ ಪಕ್ಷದ ನಾಯಕರ ಜತೆ ಮಾತನಾಡಿ ನಿರ್ಧಾರ ತಿಳಿಸುತ್ತೇವೆ ಎಂದು ಹೇಳಿದ್ದಾರೆ.