ಬೆಂಗಳೂರು, ಆ 23 (DaijiworldNews/DB): ಹಾವು ಕಡಿತದಿಂದ ಮಿದುಳು ನಿಷ್ಕ್ರಿಯಗೊಂಡಿದ್ದ ಉರಗ ರಕ್ಷಕ ಸ್ನೇಕ್ ಲೋಕೇಶ್ ಇಂದು ಕೊನೆಯುಸಿರೆಳೆದಿದ್ದಾರೆ.
ದಾಬಸ್ಪೇಟೆಯಲ್ಲಿ ಮೂಟೆ ಕೆಳಗೆ ಅವಿತಿದ್ದ ಹಾವನ್ನು ರಕ್ಷಿಸುವ ವೇಳೆ ಹಾವು ಕಡಿತಕ್ಕೊಳಗಾಗಿ ನೆಲಮಂಗಲದ ಮಾರುತಿ ಬಡಾವಣೆ ನಿವಾಸಿ ಲೋಕೇಶ್ ಅವರು ಯಶವಂತಪುರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಸಾವನ್ನಪ್ಪಿದರು.
ಸಾವಿರಾರು ಹಾವುಗಳನ್ನು ಹಿಡಿದು ರಕ್ಷಿಸಿದ ಖ್ಯಾತಿ ಅವರದು. ಹೀಗಾಗಿ ಸ್ನೇಕ್ ಲೋಕೇಶ್ ಎಂದೇ ಜನಜನಿತರಾಗಿದ್ದರು. ಮೃತ ಲೋಕೇಶ್ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.