ಪಣಜಿ, ಆ 23 (DaijiworldNews/MS): ಹರಿಯಾಣ ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ನಿನ್ನೆ ರಾತ್ರಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 43 ವರ್ಷ ಸೋನಾಲಿ ಫೋಗಟ್ ತಮ್ಮ ಸಿಬ್ಬಂದಿಗಳೊಂದಿಗೆ ಗೋವಾಕ್ಕೆ ತೆರಳಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆದಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.ಈ ನಡುವೆ ಬಿಷ್ಣೋಯ್ ಬಿಜೆಪಿಗೆ ಸೇರ್ಪಡೆಗೊಂಡು ಕಳೆದ ತಿಂಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಉಪಚುನಾವಣೆಯಲ್ಲಿ ಆದಂಪುರದಿಂದ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿಷ್ಣೋಯ್ ಕಳೆದ ವಾರವಷ್ಟೇ ಸೋನಾಲಿ ಫೋಗಟ್ ಅವರನ್ನು ಭೇಟಿ ಮಾಡಿದ್ದರು.
ಸೋನಾಲಿ ಫೋಗಟ್ ಟಿಕ್ಟಾಕ್ ವೀಡಿಯೊಗಳೊಂದಿಗೆ ಖ್ಯಾತಿ ಪಡೆದಿದ್ದರು. 2006 ರಲ್ಲಿ ಟಿವಿ ನಿರೂಪಕಿಯಾಗಿ ಪಾದಾರ್ಪಣೆ ಮಾಡಿದರು.
ರಿಯಾಲಿಟಿ ಶೋ ಬಿಗ್ ಬಾಸ್ 2020 ರ ಆವೃತ್ತಿಯಲ್ಲೂ ಅವರು ಭಾಗವಹಿಸಿದ್ದರು