ಪಾಟ್ನಾ, ಆ 23 (DaijiworldNews/HR): ಎರಡನೇ ಮದುವೆಯಾದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲು ಹೋದ ಪೊಲೀಸ್ ತಂಡದ ಮೇಲೆ ಮಹಿಳೆಯರು ಹಲ್ಲೆ ನಡೆಸಿ ಚಪ್ಪಲಿ ಎಸೆದು ಥಳಿಸಿರುವ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿದೆ.
ಮೊದಲ ಪತ್ನಿ ಜೀವಂತವಿರುವಾಗಲೇ ಎರಡನೇ ಮದುವೆಯಾಗಿರುವ ಆರೋಪಿ ಅಸ್ಗರ್ ಮಲ್ಲಿಕ್ನನ್ನು ಬಂಧಿಸಲು ಪಶ್ಚಿಮ ಬಂಗಾಳ ಪೊಲೀಸರು ತೆರೆಲಿದ್ದು, ಈ ವೇಳೆ ಪೊಲೀಸರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ, ಆರೋಪಿ ಪತ್ನಿ ನಸ್ರೀನ್ ಪ್ರವೀಣ್ ಠಾಣೆಗೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಪಶ್ಚಿಮ ಬಂಗಾಳದ ಅಸನ್ಸೋಲ್ ನಿವಾಸಿ ನೇಹಾ ಪ್ರವೀಣ್ ಅವರ ದೂರಿನ ಮೇರೆಗೆ, ಬಂಗಾಳ ಪೊಲೀಸರು ಅಸ್ಗರ್ ಮಲ್ಲಿಕ್ ಅವರನ್ನು ಬಂಧಿಸಲು ಭಾನುವಾರ ಜಮುಯಿ ತಲುಪಿದ್ದು, ಕುಟುಂಬದ ಮಹಿಳೆಯರು ಅವರ ವಿರುದ್ಧ ಪ್ರತಿಭಟಿಸಿ, ಹಲ್ಲೆ ನಡೆಸಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣೆ ಅಧ್ಯಕ್ಷ ರಾಜೀವ್ ಕುಮಾರ್ ತಿವಾರಿ ಮಾತನಾಡಿ, ಎರಡನೇ ಮದುವೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಪಶ್ಚಿಮ ಬಂಗಾಳ ಪೊಲೀಸರು ಆಗಮಿಸಿದ್ದು, ಪೊಲೀಸರು ಯಾರನ್ನೂ ಬಂಧಿಸಲು ಸಾಧ್ಯವಾಗಲಿಲ್ಲ. ಹೀಗಿದ್ದರೂ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿ ಹಾಗೂ ಚಪ್ಪಲಿ ಹಿಡಿದು ಓಡಿಸಿರುವ ಬಗ್ಗೆ ತಂಡ ಮಾಹಿತಿ ನೀಡಿಲ್ಲ. ಇದೇ ವೇಳೆ ಮಹಿಳೆಯೊಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.