ಥಾಣೆ, ಆ 22 (DaijiworldNews/MS): ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ನಗರದಲ್ಲಿ ಕೊಲೆ ಆರೋಪಿಯೊಬ್ಬ ಪೊಲೀಸ್ ವ್ಯಾನ್ನೊಳಗೆ ಕುಳಿತು ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸುವ ವೈರಲ್ ವೀಡಿಯೊ
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಸುಲಿಗೆ, ಕೊಲೆ, ಕೊಲೆ ಬೆದರಿಕೆ ಹೀಗೆ ಹಲವಾರು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ರೋಷನ್ ಝಾ ಜೈಲಿನಲ್ಲಿದ್ದು, ಪ್ರಕರಣ ವಿಚಾರಣೆಗಾಗಿ ಜೈಲಿನಿಂದ ಕಲ್ಯಾಣ್ ನ ನ್ಯಾಯಾಲಯಕ್ಕೆ ಕರೊದೊಯ್ಯುವ ವೇಳೆ ಆರೋಪಿಯ ಬೆಂಬಲಿಗರು ತಂದಿದ್ದ ಕೇಕ್ ಒಂದನ್ನು ಪೊಲೀಸ್ ವಾಹನದಲ್ಲೇ ಕುಳಿತು ವಿಂಡೋ ಮೂಲಕ ಕತ್ತರಿಸಿದ್ದಾನೆ, ಅಲ್ಲದೆ ಆರೋಪಿಯ ಬೆಂಬಲಿಗರು ಕೇಕ್ ಕತ್ತರಿಸುವ ವಿಡಿಯೋ ಮಾಡಿ ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ
ಅತ್ತ ಆರೋಪಿ ಕೇಕ್ ಕತ್ತರಿಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವೈಫಲ್ಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ