ವಿಜಯಪುರ, ಆ 22 (DaijiworldNews/MS): ರಾಜ್ಯದಲ್ಲಿ ಸಾವರ್ಕರ್ ಪರ-ವಿರೋಧ ವಾದ ತಾರಕಕ್ಕೇರುತ್ತಿರುವ ನಡುವೆಯೇ ವಿಜಯಪುರದ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ಪ್ರತ್ಯಕ್ಷವಾಗಿದೆ.
ಜಲನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ರಾತ್ರೋರಾತ್ರಿ ಸಾವರ್ಕರ್ ಅವರ ಹತ್ತಾರು ಭಾವಚಿತ್ರಗಳನ್ನು ಕಿಡಗೇಡಿಗಳು ಅಂಟಿಸಿದ್ದಾರೆ. ಕಚೇರಿಯ ಬಾಗಿಲು, ಕಿಟಕಿ, ಗೋಡೆ ಹೀಗೆ ಸಿಕ್ಕಿದಲ್ಲಿ ಸಾವರ್ಕರ್ ಭಾವಚಿತ್ರ ಅಂಟಿಸಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ಭಾವಚಿತ್ರ ಅಂಟಿಸಿರುವ ವಿಷಯ ಬೆಳಿಗ್ಗೆ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ, ಭಾವಚಿತ್ರಗಳನ್ನು ತೆರವುಗೊಳಿಸಿದ್ದಾರೆ.ಕಾಂಗ್ರೆಸ್ ಕಚೇರಿ ಸಮೀಪದಲ್ಲೇ ಬಿಜೆಪಿ ಜಿಲ್ಲಾ ಕಚೇರಿಯೂ ಇದೆ.