ಹಾಸನ, ಆ 21 (DaijiworldNews/SM): ಮೊಟ್ಟೆ ಎಸೆದರೆಂದು ಎರಡು ಪಕ್ಷಗಳು ಪಾದಯಾತ್ರೆ, ಪ್ರತಿಭಟನೆ ಹಮ್ಮಿಕೊಂಡಿವೆ. ರಾಜ್ಯದಲ್ಲಿ ಉಂಟಾದ ನೆರೆ, ಪ್ರವಾಹ ಪರಿಸ್ಥಿತಿ ಬಗ್ಗೆ ಇವರಲ್ಲಿ ಕಾಳಜಿ ಇಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.
ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 2019ರಲ್ಲಿ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಮನೆ ಒದಗಿಸಲಾಗಿಲ್ಲ. ಕೆಲವರು ಮೂರು ವರ್ಷದಿಂದ ತಾತ್ಕಾಲಿಕ ಶೆಡ್ಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇದ್ದು ಅದರತ್ತ ಗಮನ ಕೊಡದ ರಾಜಕೀಯ ಪಕ್ಷಗಳು ಕೇವಲ ಪಾದಯಾತ್ರೆಯ ನಾಟಕ ಮಾಡುತ್ತಿವೆ ಎಂದು ಅವರು ಟೀಕಿಸಿದರು.
ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ವರ್ತನೆಯನ್ನು ನಾಡಿನ ಜನರು ಗಮನಿಸಿದ್ದಾರೆ. ಜಾಹೀರಾತುಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಅವಹೇಳನ ಮಾಡಿದನ್ನೂ ನೋಡಿದ್ದಾರೆ. ನೂರಾರು ಸಮಸ್ಯೆಗಳಿವೆ. ರೈತ ಪರ ಯೋಚನೆ ಎರಡು ಕಾಂಗ್ರೆಸ್ ಬಿಜೆಪಿ ಮಾಡುತ್ತಿಲ್ಲ. ಇವರಿಗೆ ಜನರೇ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದರು. ಸಿದ್ದರಾಮಯ್ಯ ಭ್ರಮಾಲೋದಲ್ಲಿದ್ದಾರೆ ಸಿದ್ದರಾಮೋತ್ಸವ ನಂತರ ಜೆಡಿಎಸ್, ಬಿಜೆಪಿ ಹತಾರಾಗಿವೆ ಎಂದು ಹೇಳಿದ್ದ ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.