ಬೆಂಗಳೂರು, ಆ 21 (DaijiworldNews/HR): ಪಶ್ಚಾತ್ತಾಪದ ಮಾತು ನಿಮ್ಮಿಂದ ಯಾರೂ ನಿರೀಕ್ಷಿಸುವುದಿಲ್ಲ. ಆದರೆ ಧರ್ಮಗುರುಗಳ ದರ್ಶನಕ್ಕೆ ತೆರಳಿ ಅಲ್ಲಿಯೂ ವಿತಂಡ ವಿವಾದ ಸೃಷ್ಟಿಸುವುದು ಎಷ್ಟು ಸರಿ? ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ತಮ್ಮಅವಧಿಯ ಜನ ವಿರೋಧಿ ಆಡಳಿತ ಹಾಗೂ ರಾಜಕಾರಣದ ವೈಫಲ್ಯ ಮುಚ್ಚಿ ಕೊಳ್ಳಲು ಧರ್ಮ ರಾಜಕಾರಣಕ್ಕೆ ಕೈ ಹಾಕಿ ಮುಖಭಂಗ ಅನುಭವಿಸಿ ತಕ್ಕ ಬೆಲೆ ತೆತ್ತ ಸಿದ್ದರಾಮಯ್ಯನವರೇ, ಪಶ್ಚಾತ್ತಾಪದ ಮಾತು ನಿಮ್ಮಿಂದ ಯಾರೂ ನಿರೀಕ್ಷಿಸುವುದಿಲ್ಲ. ಆದರೆ, ಧರ್ಮಗುರುಗಳ ದರ್ಶನಕ್ಕೆ ತೆರಳಿ ಅಲ್ಲಿಯೂ ವಿತಂಡ ವಿವಾದ ಸೃಷ್ಟಿಸುವುದು ಎಷ್ಟು ಸರಿ? ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯನವರೇ ಒಂದುಕಡೆ ಧರ್ಮ ಒಡೆಯುವ, ಮತ್ತೊಂದು ಕಡೆ ವೀರ್ ಸಾವರ್ಕರ್ ರಂತಹ ಸ್ವಾತಂತ್ರ್ಯ ಸೇನಾನಿಗಳನ್ನು ಅವಹೇಳನ ಮಾಡುವ ಮೂಲಕ ಮತಾಂಧರನ್ನು ಎತ್ತಿ ಕಟ್ಟುವ ನಿಮ್ಮ ರಾಜಕೀಯ ನಡೆ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಧರ್ಮರಾಜಕಾರಣದ ಬಿಸಿ ಅನುಭವಿಸಿಯೂ ಮತ್ತದೇ ಹಾದಿಯಲ್ಲಿ ಸಾಗಿರುವ ನಿಮಗಾಗಿ ಬಹುದೊಡ್ಡ ಕಂದಕ ಕಾಯುತ್ತಿದೆ ಎಂದು ಹೇಳಿದ್ದಾರೆ.