ಕುರುಕ್ಷೇತ್ರ, ಆ 21 (DaijiworldNews/DB): ವಿದ್ಯಾರ್ಥಿಯೊಬ್ಬ ಕೆನಡಾಕ್ಕೆ ಹೋಗಲು ವೀಸಾ ಬಂದಿಲ್ಲವೆಂಬ ಕೊರಗಿನಿಂದ ಆತ್ಮಹತ್ಯೆಗೆ ಶರಣಾದ ಘಟನೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ನಡೆದಿದೆ.
ಶಹಬಾದ್ ಉಪವಿಭಾಗದ ಗೂರ್ಖಾ ಗ್ರಾಮದ ವಿಕೇಶ್ ಸೈನಿ ಅಲಿಯಾಸ್ ದೀಪಕ್ (23) ಮೃತ ವಿದ್ಯಾರ್ಥಿ.
ದೀಪಕ್ಗೆ ಗುರುವಾರ ವೀಸಾ ಬಂದಿತ್ತಾದರೂ, ಅದು ಕಾಣೆಯಾದ ಕಾರಣ ಈ ವಿಚಾರವನ್ನು ಮನೆಯವರು ಆತನಿಗೆ ತಿಳಿಸಿರಲಿಲ್ಲ. ಆದರೆ ಸ್ನೇಹಿತರನಿಗೆ ವೀಸಾ ಬಂದಿರುವುದು ದೀಪಕ್ಗೆ ತಿಳಿದಿದ್ದು, ತನ್ನ ವೀಸಾ ಇನ್ನೂ ಬಂದಿಲ್ಲ ಎಂದು ಅಸಮಾಧಾನಗೊಂಡಿದ್ದ. ಇದೇ ಕೊರಗಿನಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜನ್ಸಾ ಪಟ್ಟಣದ ಕಾಲುವೆ ಬಳಿ ಶುಕ್ರವಾರ ಆತನ ಶವ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821