ಉತ್ತರ ಪ್ರದೇಶ, ಆ 21 (DaijiworldNews/HR): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮತ್ತೆ ಕೊಲೆ ಬೆದರಿಕೆ ಬಂದಿದ್ದು, ಫೇಸ್ಬುಕ್ನಲ್ಲಿ ತಲೆ ಕತ್ತರಿಸುವುದಾಗಿ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೊರಾದಾಬಾದ್ ನಿವಾಸಿ ಆತ್ಮ ಪ್ರಕಾಶ್ ಪಂಡಿತ್ ಎಂಬ ವ್ಯಕ್ತಿಯ ಫೇಸ್ ಬುಕ್ ಖಾತೆಯಿಂದ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಲಾಗಿದ್ದು, ವ್ಯಕ್ತಿ ತನ್ನ ಫೇಸ್ ಬುಕ್ ಖಾತೆಯಿಂದ ಈ ಕೃತ್ಯ ಎಸಗಿರುವುದು ತಿಳಿದು ತಾವೇ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ.
ಇನ್ನು ಸಿಎಂ ಯೋಗಿಗೆ ಈ ಬೆದರಿಕೆಯನ್ನು ಅವರ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ಪೇಜ್ ಕ್ರಿಯೇಟ್ ಮಾಡಿ ಪೋಸ್ಟ್ ಮಾಡಲಾಗಿದೆ ಎಂದು ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.