ಮಹಾರಾಷ್ಟ್ರ, ಆ 20 (DaijiworldNews/HR): ಜನರು ರಸ್ತೆ ದಾಟಲು ಬಳಸುವ ಫೂಟ್ ಓವರ್ ಬ್ರಿಡ್ಜ್ ನಲ್ಲಿ ಚಾಲಕನೊಬ್ಬ ಆಟೋ ಚಲಾಯಿಸಿರುವ ಘಟನೆ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ನಡುವೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದಿದೆ.
ಪಾದಚಾರಿ ಮೇಲ್ಸೇತುವೆಯಲ್ಲಿ ಈ ಆಟೋ ಸಂಚರಿಸಿರುವ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇನ್ನು ಈ ವಿಚಾರಕ್ಕೆ ಸಂಬಂಧಿಸಿ ಪರ-ವಿರೋಧ ಚರ್ಚೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿವೆ.