ನವದೆಹಲಿ, ಆ 18 (DaijiworldNews/DB): ಬಿಎಸ್ಪಿ ಸಂಸದ ಅಫ್ಜಲ್ ಅನ್ಸಾರಿ ಅವರ ಅಧಿಕೃತ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಅಫ್ಜಲ್ ಸಹೋದರ ಮುಖ್ತಾರ್ ಅನ್ಸಾರಿ ಅವರನ್ನು ತನಿಖೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಕೇಂದ್ರ ದೆಹಲಿಯ ಜನಪಥ್ನಲ್ಲಿರುವ ಅಫ್ಜಲ್ ನಿವಾಸದ ಮೇಲೆ ಇಂದು ದಾಳಿ ನಡೆದಿದೆ. ದಾಳಿ ವೇಳೆ ಸಿಆರ್ಪಿಎಫ್ ಭದ್ರತೆ ಕೈಗೊಳ್ಳಲಾಗಿದ್ದು, ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಸದ್ಯ ಮುಖ್ತಾರ್ ಜೈಲಿನಲ್ಲಿದ್ದು, ಕೊಲೆ, ಸುಲಿಗೆ, ಭೂ ಕಬಳಿಕೆ ಸೇರಿದಂತೆ ಒಟ್ಟು 49 ಅಪರಾಧ ಪ್ರಕರಣಗಳು ಮುಖ್ತಾರ್ ವಿರುದ್ದ ದಾಖಲಾಗಿವೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇದಲ್ಲದೆ ಮುಕ್ತಾರ್ ಮತ್ತು ಅವರ ಸಹವರ್ತಿಗಳಿಗೆ ಸೇರಿದ ಗಾಜಿಪುರ, ಮೊಹಮ್ಮದಾಬಾದ್, ಮೌ ಹಾಗೂ ಲಖನೌನಲ್ಲಿಯೂ ಇದೇ ವೇಳೆ ದಾಳಿ ನಡೆಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಅಫ್ಜಲ್ಗೆ ಸೇರಿದ್ದ 14.90 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಗೂಂಡಾ ಕಾಯ್ದೆಯಡಿ ಜುಲೈನಲ್ಲಿ ಜಪ್ತಿ ಮಾಡಿದ್ದರು.