ಪಾಟ್ನಾ, ಆ 18 (DaijiworldNews/MS): 16 ವರ್ಷದ ವಿದ್ಯಾರ್ಥಿನಿ ಮೇಲೆ ಯುವಕನೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದ ಸಿಪಾರಾ ಪ್ರದೇಶದಲ್ಲಿ ನಡೆದಿದೆ.
ಟ್ಯೂಷನ್ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಹಿಂದಿನಿಂದ ಬಂದ ದುಷ್ಕರ್ಮಿ ಆಕೆಯ ಕುತ್ತಿಗೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ.
ಪ್ರೀತಿ ನಿರಾಕರಿಸಿದ್ದೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಬ್ಯೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಿಪರಾದ ಇಂದ್ರಪುರಿ ಏರಿಯಾದಲ್ಲಿ ಘಟನೆ ನಡೆದಿದೆ.ಬ್ಯಾಗ್ ಒಂದನ್ನು ಹಿಡಿದುಕೊಂಡು ಬರುವ ಯುವಕ, ತನ್ನ ಹಿಂದೆ ಹುಡುಗಿ ಬರುವುದನ್ನು ನೋಡಿ ಅಲ್ಲಿಯೇ ನಿಲ್ಲುತ್ತಾನೆ. ಹುಡುಗಿ ಜನರಿಲ್ಲದ ಕಿರಿದಾದ ರಸ್ತೆ ಕಡೆ ಬಂದು ಯುವಕನನ್ನು ದಾಟಿ ಮುಂದೆ ಹೋಗುವಾಗ ಹಿಂದೆ ಬ್ಯಾಗ್ನಿಂದ ರಿವಾಲ್ವರ್ ತೆಗೆದುಕೊಳ್ಳುವ ಆತ ಹುಡುಗಿಯ ಕುತ್ತಿಗೆಗೆ ಗುಂಡಿಕ್ಕುತ್ತಾನೆ.ಅದಕ್ಕೆ ಸಂಬಂಧಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.