ವಿಕಾರಾಬಾದ್, ಆ 18 (DaijiworldNews/MS): ಬೆಳಗಾವಿ ನಂತರ ಇದೀಗ ರಾಯಚೂರು ಗಡಿ ವಿವಾದ ಆರಂಭವಾಗುವ ಲಕ್ಷಣ ಗೋಚರಿಸುತ್ತಿದೆ . ಇದಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೀಡಿದ ಹೇಳಿಕೆ ಸಾಕ್ಷಿಯಾಗಿದೆ.
"ರಾಯಚೂರು ಜಿಲ್ಲೆಯ ಜನ ತಮ್ಮನ್ನು ತೆಲಂಗಾಣಕ್ಕೆ ಸೇರಿಸಿಕೊಳ್ಳಿ ಎಂದು ನನ್ನನ್ನು ಒತ್ತಾಯಿಸುತ್ತಿದ್ದಾರೆ" ಎಂದು ಕೆಸಿಆರ್ ವಿಕಾರಾಬಾದ್ನಲ್ಲಿ ಬುಧವಾರ ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
2016 ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಕಾರಾಬಾದ್ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಚೇರಿ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ.
‘ಬಿಜೆಪಿ ಧ್ವಜಗಳಿಗೆ ಮೋಸ ಹೋಗಬೇಡಿ. ತೆಲಂಗಾಣದ ಕಲ್ಯಾಣ ಕಾರ್ಯಕ್ರಮ ನೋಡಿ ರಾಯಚೂರು ಗಡಿ ಜನ, ತೆಲಂಗಾಣ ರಾಜ್ಯ ಸೇರಬೇಕು ಎನ್ನುತ್ತಿದ್ದಾರೆ’ ಎಂದು ಕೆಸಿಆರ್ ಹೇಳಿದ್ದಾರೆ. ಈ ಮೂಲಕ ರಾಯಚೂರನ್ನು ತೆಲಂಗಾಣಕ್ಕೆ ಪಡೆಯುವ ವಾದಕ್ಕೆ ಮುಖ್ಯಮಂತ್ರಿ ಕೆಸಿಆರ್ ಬುಧವಾರ ಮರುಜೀವ ನೀಡಿದ್ದಾರೆ.