ನವದೆಹಲಿ, ಆ 17 (DaijiworldNews/DB): ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನಗಳೊಳಗೆ ಮಾಸ್ಕ್ ಧರಿಸುವುದನ್ನು ವಿಮಾನಯಾನ ನಿಯಂತ್ರಕ ಡಿಜಿಸಿಎ ಕಡ್ಡಾಯಗೊಳಿಸಿದೆ.
ಪ್ರಯಾಣಿಕರು ವಿಮಾನ ಪ್ರಯಾಣದ ವೇಳೆ ಮಾಸ್ಕ್ ಧರಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚಿಸಿದೆ.
ನಿರ್ದೇಶನಗಳನ್ನು ಪ್ರಯಾಣಿಕರು ಪಾಲಿಸದಿದ್ದರೆ ಅಂತಹವರ ವಿರುದ್ದ ವಿಮಾನಯಾನ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳಲಿವೆ. ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಬಳಿಕ ಪ್ರಯಾಣದ ವೇಳೆ ಆರಂಭದಿಂದ ಕೊನೆಯವರೆಗೂ ಮಾಸ್ಕ್ ಧರಿಸುವುದು ಮುಖ್ಯ. ಇದನ್ನು ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.