ಹನುಮಾನ್ಗಢ್, ಆ 17 (DaijioworldNews/HR): ಸಾಧು ಚೇತನ್ ದಾಸ್ ಅವರು ರಾಜಸ್ಥಾನದ ಭಖ್ರವಾಲಿ ಗ್ರಾಮದಲ್ಲಿರುವ ಗುಡಿಸಲಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ದೇಹದ ಮೇಲೆ ಗಾಯದ ಗುರುತುಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಧುವಿನ ಮೃತದೇಹ ನೋಡಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ.
ಇನ್ನು ಚೇತನ್ ದಾಸ್ ಅವರ ಕೊಲೆಗೆ ಕಾರಣ ಏನು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.
ಸಾಧು ಚೇತನ್ ದಾಸ್ ಸುಮಾರು 25 ವರ್ಷಗಳಿಂದ ಭಖ್ರಾವಲಿ ಗ್ರಾಮದ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಅವರ ಮೃತದೇಹ ಗುಡಿಸಲಿನ ಹೊರಗೆ ಬಿದ್ದಿತ್ತು. ದೇಹದ ಸುತ್ತ ರಕ್ತ ಚಿಮ್ಮಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.